ಬ್ರಾಹ್ಮಿ ಅಥವಾ ಒಂದೆಲಗ ಎನ್ನುವುದು ಹಲವಾರು ವಿಧದ ಔಷಧೀಯ ಗುಣಗಳನ್ನು ಹೊಂದಿರುವಂತಹ ಒಂದು ಸೊಪ್ಪು.
ಈ ಗಿಡದ ಬಳ್ಳಿ ಎಲ್ಲಿಯಾದ್ರೂ ಸಿಕ್ಕರೆ ಬಿಡ ಬೇಡಿ ಇದರಲ್ಲಿ ಅಡಗಿದೆ ಅಪಾರ ಅರೋಗ್ಯ ಬ್ರಾಹ್ಮಿ ಅಥವಾ ಒಂದೆಲಗ ಎನ್ನುವುದು ಹಲವಾರು ವಿಧದ ಔಷಧೀಯ ಗುಣಗಳನ್ನು ಹೊಂದಿರುವಂತಹ ಒಂದು ಸೊಪ್ಪು ಎಂದು ಹೇಳಬಹುದು. ಇದನ್ನು ಹಿಂದಿನಿಂದಲೂ ಆಹಾರ ಕ್ರಮ ಹಾಗೂ ಔಷಧಿಯಾಗಿ ಬಳಕೆ ಮಾಡಿಕೊಂಡು ಬರಲಾಗುತ್ತಿದೆ. ಇದರಲ್ಲಿ ಮನಸ್ಸಿಗೆ ಶಮನ ನೀಡುವಂತಹ ಗುಣಗಳು ಕೂಡ ಇವೆ ಎಂದು ಕಂಡುಕೊಳ್ಳಲಾಗಿದೆ. ಇಂದಿನ ಕೊರೊನಾ ಸಮಯದಲ್ಲಿ ಪ್ರತಿಯೊಬ್ಬರು ಮನೆಯಲ್ಲಿ ಕೂಡಿ ಹಾಕಲ್ಪಟ್ಟ ಪರಿಸ್ಥಿತಿಯಲ್ಲಿ ಇರುವ ಕಾರಣದಿಂದಾಗಿ ಮಾನಸಿಕ ಒತ್ತಡವು ಅತಿಯಾಗುತ್ತಿದೆ. ಮಾನಸಿಕ ಒತ್ತಡವು ಹೆಚ್ಚಾದರೆ ಅದು ಇನ್ನಿತರ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುವುದು. ಈ ಕಾರಣ ಮಾನಸಿಕ ಒತ್ತಡವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಅತೀ ಅಗತ್ಯ. ಮಾನಸಿಕ ಒತ್ತಡವನ್ನು ನಿಯಂತ್ರಿಸಲು ಆಯುರ್ವೇದದಲ್ಲಿ ಬ್ರಾಹ್ಮಿಯನ್ನು ಬಳಸಲಾಗಿದೆ. ಬ್ರಾಹ್ಮಿ ತುಂಬಾ ಪರಿಣಾಮಕಾರಿ ಔಷಧಿಯಾಗಿದ್ದು, ಇದು ಚಿಕಿತ್ಸಕ ಗುಣವನ್ನು ಹೊಂದಿದೆ ಹಾಗೂ ಮನಸ್ಸಿಗೆ ಕೂಡ ಶಮನ ನೀಡುವುದು. ಇದು ನಮ್ಮ ನರವ್ಯವಸ್ಥೆಯನ್ನು ಸುಧಾರಣೆ ಮಾಡಿಕೊಂಡು ಮೆದುಳಿನ ಕಾರ್ಯವನ್ನು ಉತ್ತಮಪಡಿಸುವುದು. ಬ್ರಾಹ್ಮಿ ಅಥವಾ ಒಂದೆಲಗದ ಎಲೆಗಳನ್ನು ತಿನ್ನುವುದರಿಂದ ನಮಗೆ ಸಿಗುವ ಆರೋಗ್ಯಕರ ಲಾಭಗಳ ಬಗ್ಗೆ ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ. ಸಸ್ಯ ಶಾಸ್ತ್ರದ ಪ್ರಕಾರ, ಒಂದೆಲಗ ಅಥವಾ ಬ್ರಾಹ್ಮೀ ಎಲೆಯು ಸರಸ್ವತಿಯ ಔಷಧೀಯ ಆಹಾರವಾಗಿಯೂ ...